ಹೀಗೆ ನಮ್ಮ ಜನಪ್ರಿಯ ಚಿತ್ರಗೀತೆಗಳನ್ನೆಲ್ಲಾ ಬದಲಿಸಿಕೊಂಡು ಹಾಡುವಂತೆ, ನಡುಗುತ್ತಾ ಮುದುರುವಂತೆ ಈ ಸಲ ಚಳಿಗಾಲ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. `ಗರಿಮುದುರು ಮಲಗಿದ್ದ ಹಕ್ಕಿಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತ್ತಿತ್ತು' ಎಂಬ ಎಸ್‌ವಿ ಪರಮೇಶ್ವರ ಭಟ್ಟರ ಸಾಲುಗಳನ್ನು ಕೇಳುತ್ತಿದ್ದರೆ ನಮಗೆಲ್ಲಾ ಚಳಿಯ ಈ ದಿನಗಳೇ ನೆನಪಾಗುತ್ತವೆ.
ಕಿವಿಗೊಂದು ಮಫ್ಲರ್, ಮೈಗೆ ಸ್ವೆಟರ್, ಕಾಲಿಗೆ ಸಾಕ್ಸ್, ಆಗಾಗ ಉಜ್ಜಿ ಉಜ್ಜಿ ಕೈಬಿಸಿ ಮಾಡಿಕೊಳ್ಳುವ ಅಗತ್ಯ, ಬೆಂಕಿ ಕಂಡರೆ, ಬಿಸಿಲು ಬಿದ್ದರೆ ಮೈ ಒಡ್ಡುವ ತವಕ. ಬೆಳಿಗ್ಗೆಯ ವಾಕಿಂಗ್ ಬ್ಯಾನ್ ಮಾಡಿ, ಸಂಜೆಯ ಯಾವುದಾದರೂ ಮೀಟಿಂಗ್ ಕ್ಯಾನ್ಸಲ್ ಮಾಡಿ ಮನೆ ಸೇರಿಕೊಂಡು, ಕಂಬಳಿ ಸೇರಿಕೊಳ್ಳುವವರ ಸಂಖ್ಯೆ ಜಾಸ್ತಿ ಇರಬಹುದು.
ತುಟಿ ಒಡೆಯದಿರಲು ಲಿಪ್‌ಗಾರ್ಡೂ ಮೈಕೈ ಒಡೆದು ಸಿಪ್ಪೆ ಏಳದಿರಲು ವ್ಯಾಸಲಿನ್ನೂ ನಮಗೀಗ ಬೇಕಾಗಿದೆ. ಅದನ್ನು ಕೊಂಡು ತರುವವರೂ ಹೆಚ್ಚು, ಅದಕ್ಕಾಗಿ ಅಂಗಡಿಯಲ್ಲಿ ವ್ಯಾಪಾರವೂ ಹೆಚ್ಚು. ಇಂಥದೇ ಚಳಿಯ ಬಗ್ಗೆ ಶೇಕ್ಸ್‌ಪಿಯರ್ `ಬ್ಲೋ ಬ್ಲೋ ದೌ ವಿಂಟರ್‌ವಿಂಡ್' ಎಂದು ಬರೆದ. ಅವನು ಚಳಿಗಾಳಿ ಬಗ್ಗೆ ಬರೆದ ಸಂದರ್ಭದಲ್ಲಿ ಅವನದೇ ಪಾತ್ರ ಕಿಂಗ್ ಲೀಯರ್ ತನ್ನ ಮಕ್ಕಳಿಂದ ಬೇರ್ಪಟ್ಟು, ನಿರ್ಗತಿಕನಾಗಿದ್ದ. ನಿರ್ಗತಿಕನಾಗುವುದಕ್ಕಿಂತ ಚಳಿ ಬೇರಿಲ್ಲ. `ಸುಳಿ ಸುಳಿ ಓ ಚಳಿಗಾಳಿ, ಮನುಷ್ಯಗಿಂತ ನೀ ನಿರ್ದಯವಲ್ಲ ತಿಳಿ' ಎಂದು ಶೇಕ್ಸ್‌ಪಿಯರ್ ಅದ್ಭುತವಾಗಿ ಬರೆಯುತ್ತಾ ಹೋಗುತ್ತಾನೆ.
ಅದೇನೇ ಇದ್ದರೂ ಚಳಿಯಿಂದ ಮುದುರಿ ಕುಳಿತ, ಮೈಕೈ ಬಿರಿದು ಕೂತ ಈ ಹೊತ್ತಿಗೆ ಕಣ್ಣನ್ನು, ಆ ಮೂಲಕ ಮನಸ್ಸನ್ನು ಬೆಚ್ಚಗಾಗಿಸಲು ಇಲ್ಲಿ ಚಳಿಗಾಲದ ಒಂದಿಷ್ಟು ಫೋಟೋಗಳನ್ನು ಪ್ರಕಟಿಸಲಾಗುತ್ತಿದೆ. ಇದನ್ನು ನ್ಯೂಸ್ ಏಜನ್ಸಿ, ಫೋಟೋ ಬಕೆಟ್ ಮೊದಲಾದ ಮೂಲಗಳಿಂದ ಬಳಸಿಕೊಳ್ಳಲಾಗಿದೆ. ಅವರಿಗೆಲ್ಲಾ ಕೃತಜ್ಞತೆಗಳು.
ಫೋಟೋಸ್ ಸಕ್ಕತ್ತಾಗಿದೆ:)
ReplyDelete