ಆದರೆ ಇಲ್ಲಿ ಕೆಲವು ಅಂಶಗಳನ್ನು ಸ್ಪಷ್ಟಪಡಿಸಬೇಕು. ಒಂದು, ಮುಸ್ಲಿಂ ಸಮುದಾಯದ ಮೇಲೆ ಇರುವ ಅನುಮಾನ ಅಮಾನವೀಯ ಎನ್ನುವುದು. ಈ ಮಾತುಗಳನ್ನು ಕೆಲವರ ಸಣ್ಣ ಆಕ್ಷೇಪದೊಂದಿಗೆ ನೋಡಿಯಾರು. ಆದರೆ ಒಂದಂತೂ ಸತ್ಯ. ಭಯೋತ್ಪಾದಕತೆಯನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಸಬೇಕು. ಭಯೋತ್ಪಾದನೆ ನಿಗ್ರಹಕ್ಕೆ ಕಾನೂನಿನ, ರಕ್ಷಣಾ ತಂತ್ರ ಮಟ್ಟದ ಪರಿಹಾರ ಸಿಗಬೇಕು. ಹಾಗಂತ ಭಯೋತ್ಪಾದನೆ ಎನ್ನುವ ಒಂದು `ಹಿಂಸಾನಿಲುವಿ'ಗೆ ಯಾವುದೇ ಕೋಮನ್ನು ಆರೋಪಿಸುವುದು ಸರಿಯಾದ ಅಭಿಪ್ರಾಯ ಅಲ್ಲ. ಒಂದು ಊರಲ್ಲಿ ಭ್ರೂಣ ಹತ್ಯೆ ಜಾಸ್ತಿ ಆಯಿತು ಎಂದ ಕೂಡಲೇ ಆ ಊರಲ್ಲಿರುವ ಹೆಂಗಸರೆಲ್ಲಾ `ಶಿಶುಹತ್ಯೆ' ಮಾಡುವವರು, ಕಟುಕರು ಎಂದು ಅಭಿಪ್ರಾಯಪಡುವಂತಿಲ್ಲ. ಯಾಕೆಂದರೆ ಅಲ್ಲಿರುವ ಹೆಂಗಸರಲ್ಲಿ ನಿಮ್ಮ ಅಮ್ಮನೂ ಇರಬಹುದಲ್ಲಾ?
ಹಾಗಂತ ನಮ್ಮಲ್ಲಿ ಇಂಥ ಘಟನೆಗಳ ರಾಜಕೀಯ ಲಾಭ ಪಡೆದುಕೊಳ್ಳುವ ಸಂಭವವೇ ಹೆಚ್ಚು. ಹಿಂದೊಮ್ಮೆ ಆರ್‌ಎಸ್‌ಎಸ್ ಮೇಲೆ ನಿರ್ಬಂಧ ಹೇರುವ ಮಾತು ಕೇಳಿ ಬಂದಿತ್ತು. ಆದರೆ ಅದೇ ರಾಜಕೀಯ ಮನಸ್ಸು, ಮತ್ತೊಂದು ಕೋಮಿನ ಮತ್ತೊಂದು ರಾಷ್ಟ್ರ ವಿರೋೀ ಸಂಘಟನೆ ಕಂಡು ಬಂದಿದ್ದರೆ ಹೀಗೆ ನಿರ್ಬಂಧದ ಮಾತನ್ನಾಡುತ್ತದಾ ಎನ್ನುವುದು ಪ್ರಶ್ನೆ. ಇಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವಾಗ ರಾಜಕೀಯ ನಡೆಯಬಾರದು. ಭಯೋತ್ಪಾದನೆಗೆ ಯಾವ ಸಂಘಟನೆ ಕಾರಣವಾಗಿದ್ದರೂ, ಅದರ ಕೋಮು ಯಾವುದು ಎಂಬ ಪ್ರಶ್ನೆಯನ್ನೂ ಮೀರಿ ಕ್ರಮ ಜರುಗಿಸಬೇಕು. ಅಲ್ಲಿ ಯಾವುದೋ ಕೋಮನ್ನು ಓಲೈಸುವ ತಂತ್ರವನ್ನು ಯಾವ ರಾಜಕೀಯ ಪಕ್ಷವಾದರೂ ಅನುಸರಿಸಿದರೆ ಅದಕ್ಕಿಂತ ದೊಡ್ಡ ಭಯೋತ್ಪಾದಕ ಕೃತ್ಯ ಬೇರೊಂದಿಲ್ಲ.
ಮೊನ್ನೆ ನಡೆದ ಮುಂಬೈ ಬಾಂಬ್ ಸೋಟ ಕೇವಲ ಭಯೋತ್ಪಾದನೆಯ ವಿಷಯ ಮಾತ್ರ ಅಲ್ಲ, ನಮ್ಮ ರಕ್ಷಣಾ ವೈಫಲ್ಯದ ವಿಷಯವೂ ಹೌದು. ಸಿನಿಮಾದಲ್ಲಿ ಮಾತ್ರ ಆಗಬಹುದೆಂಬ ನಂಬಿಕೆ ನಮಗೆ ಈವರೆಗೆ ಇತ್ತಲ್ಲಾ, ಆ ನಂಬಿಕೆಯನ್ನು ಮೊನ್ನೆಯ ಭೀಕರ ದಾಳಿ ತೊಡೆದುಹಾಕಿದೆ. ಸಿನಿಮಾಕ್ಕೆ ಕೊನೆಪಕ್ಷ `ಸೆನ್ಸಾರ್' ಇರುತ್ತದೆ. ಯಾವುದೇ ಪ್ರಮುಖ ವಾಣಿಜ್ಯ ಕಟ್ಟಡ, ಪಂಚತಾರಾ ಹೊಟೇಲ್, ಬಹುಮಹಡಿ ಕಟ್ಟಡಕ್ಕೆ ಸೂಕ್ತ ರಕ್ಷಣೆ ಇರಬೇಕು ಎನ್ನುವುದು ಒಂದು ಮಾತು. ಅಂಥ ಕಟ್ಟಡಗಳಲ್ಲಿ ಸಿಸಿ ಟಿವಿ ಅಳವಡಿಕೆ ಇರಬೇಕಲ್ಲವೇ, ಇದ್ದರೆ ಅಷ್ಟು ಸುಲಭವಾಗಿ ಭಯೋತ್ಪಾದಕರ ನುಸುಳುವಿಕೆ ಸಾಧ್ಯವೇ ಎನ್ನುವುದು ಪ್ರಮುಖ ಪ್ರಶ್ನೆ. ಪೊಲೀಸರು ಹುತಾತ್ಮರಾದರೆಂದು ಗೌರವಿಸುವ ನಾವು ಅವರು ಹುತಾತ್ಮರಾಗದಂತೆ ತಡೆಯಲಾಗಲಿಲ್ಲವಲ್ಲಾ, ನಮ್ಮ ರಕ್ಷಣಾ ವ್ಯವಸ್ಥೆಯ ದೌರ್ಬಲ್ಯಕ್ಕೆ ಕೊನೆಯೆಂದು ಎಂದು ಮರುಗುವ ಪ್ರಮಾಣದಲ್ಲಿ ರಾಜಿ ಮಾಡಿಕೊಂಡಿದ್ದೇವೆ.
ಮೂರು ದಿನಗಳ ಕಾಲ ನಮ್ಮ ಕಮಾಂಡರ್‌ಗಳ ಜೊತೆ ಹೋರಾಡುವಷ್ಟು ಶಶ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳನ್ನು ಹೊಟೇಲ್‌ಗೆ ತೆಗೆದುಕೊಂಡು ಹೋಗಿ ದಾಸ್ತಾನು ಮಾಡುವಷ್ಟು ನಮ್ಮ ರಕ್ಷಣಾ ವ್ಯವಸ್ಥೆ `ಮುಕ್ತ'ವಾಗಿದೆ ಎಂಬುದು ನಿಜಕ್ಕೂ ಚಿಂತಿಸತಕ್ಕ ವಿಚಾರ. ಇದೆಲ್ಲಾ ನೋಡುವಾಗ ಭಯೋತ್ಪಾದನೆಗೆ ಪೂರಕವಾದ ವಾತಾವರಣ ಇಲ್ಲಿದೆಯೇ ಎಂಬ ಪ್ರಶ್ನೆ ಈಗ ಎದ್ದು ನಿಲ್ಲುತ್ತದೆ. ಭಯೋತ್ಪಾದನೆಗೆ ಮುಸಲ್ಮಾನರೇ ಕಾರಣ ಎನ್ನುವ ಬಗ್ಗೆ ತಕರಾರು ಎತ್ತುವ ನಾವು, ಭಯೋತ್ಪಾದನೆಗೆ ಅನುಕೂಲಕರವಾದ ವಾತಾವರಣವೇ ನಮ್ಮಲ್ಲಿ ಇದೆ ಎನ್ನುವ ಬಗ್ಗೆ ಇನ್ನಷ್ಟು ಆಲೋಚಿಸಬೇಕು. ಅದು ಸರಿಯಾದರೆ ಮಾತ್ರ ಭಯೋತ್ಪಾದನೆಗೆ ಪರಿಹಾರ ಕಂಡುಕೊಂಡಲು ಸಾಧ್ಯ.
ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವ ಬಗ್ಗೆ ನಮಗೆ ಆಲೋಚನೆ ಇರಬೇಕು. ಹಾಗಂತ ಭಯೋತ್ಪಾದನೆ ಇದೆ ಎಂಬ ಕಾರಣಕ್ಕೆ `ಹಲ್ಲಿಗೆ ಹಲ್ಲು, ರಕ್ತಕ್ಕೆ ರಕ್ತ' ಎಂದು ನಾವೂ ಪ್ರತಿಹಿಂಸಾ ತಂತ್ರವನ್ನು ಪ್ರಯೋಗಿಸುವುದು ನಮ್ಮಂಥ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ತಕ್ಕ `ವ್ಯಕ್ತಿತ್ವ'ವಲ್ಲ. ನಮ್ಮ ರಕ್ಷಣಾವ್ಯವಸ್ಥೆಯನ್ನು ಬಲಪಡಿಸುವುದು, ಆದಷ್ಟು ಮುಂಜಾಗ್ರತೆ ಕ್ರಮವನ್ನು ಅನುಸರಿಸುವುದು ಈಗ ಮುಖ್ಯ. ಇಲ್ಲದಿದ್ದರೆ `ಮುಸ್ಲಿಂ ಭಯೋತ್ಪಾದಕತೆ' ಮತ್ತು `ಹಿಂದೂ ಭಯೋತ್ಪಾದಕತೆ' ಎಂಬ ಎರಡು ಬಣಗಳು ಸೃಷ್ಟಿಯಾಗುತ್ತವೆ. ಅಲ್ಲಿಗೆ ಹಿಂಸೆಗೆ ಪ್ರತಿ ಹಿಂಸೆ ಎಂಬ ಆಟವೇ ಮತ್ತೆ ಶುರುವಾಗುತ್ತದೆ.
ಅಹಿಂಸೆಯನ್ನು ನಮಗೆ ಹೇಳಿಕೊಟ್ಟು, ಗಾಂೀಜಿ ಅವರು ನಮಗೆ ಅನ್ಯಾಯ ಮಾಡಿದರು ಎಂಬ ಭಾವನೆ ನಮ್ಮಲ್ಲಿ ಕೆಲವರಿಗೆ ಇದೆ. ಆದರೆ ಅದೇ ಅಹಿಂಸೆಯೇ ಪಾರತಂತ್ರ್ಯದ ಬೇಡಿಯಿಂದ ಭಾರತವನ್ನು ಪಾರು ಮಾಡಿದ್ದು.
No comments:
Post a Comment