ಇದರ ಜವಾಬ್ದಾರಿಯನ್ನು ನಾವು ನೀವು ಜಾಗತೀಕರಣದ ಮೇಲೆ ಹಾಕಿ ಕುಳಿತುಕೊಳ್ಳಬಹುದು. ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ಇದರಲ್ಲಿ ಜವಾಬ್ದಾರರು. ಕನ್ನಡದವರೇ ಅಂಗಡಿಗಳ ಮಾಲೀಕರಾದರೂ ಬಂದ ಗಿರಾಕಿಗಳ ಜೊತೆ ಅವರದೇ ಭಾಷೆಯಲ್ಲಿ ವ್ಯವಹರಿಸಿ, ಕನ್ನಡವನ್ನು `ವ್ಯವಹಾರ ಭಾಷೆ'ಯಾಗಿ ಮಾಡದೇ ಹೋದವರು ನಾವು. ಹಾಗಿರುವಾಗ ಕನ್ನಡವನ್ನು ವ್ಯವಹಾರ ಭಾಷೆಯಾಗಿಸುವಂತೆ ಸರ್ಕಾರ ಕಾಯ್ದೆ ಕಾನೂನು ತರಲಿ ಎಂದು ಹ್ಯಾಗಾದರೂ ಅಪೇಕ್ಷಿಸುವುದು?
ಬೆಂಗಳೂರಿನ ಅನೇಕ ಪ್ರಾಂತ್ಯಗಳು ಒಂದೊಂದು ಭಾಷೆಯ ಕಾರಸ್ಥಾನವಾಗಿದೆ. ಒಂದು ಕಡೆ ತಮಿಳು, ಒಂದು ಕಡೆ ತೆಲುಗು, ಒಂದೆಡೆ ಹಿಂದಿ, ಒಂದೆಡೆ ಇಂಗ್ಲಿಷ್ ಪ್ರಾಬಲ್ಯವಿದೆ. ದುರಾದೃಷ್ಟವಶಾತ್ ಕನ್ನಡ ಪ್ರಾಬಲ್ಯವಿರುವ ಪ್ರಾಂತ್ಯ ಎಂದು ಹೆಸರಿಸಲು ಬೆರಳೆಣಿಕೆಯಷ್ಟೇ `ಎರಿಯಾ'ಗಳಿವೆ. ಆ ಭಾಗಗಳಲ್ಲೂ ಮನೆಯಲ್ಲಿ `ಟೇಕ್ ದ್ಯಾಟ್ ನ್ಯಾಪ್‌ಕಿನ್ ಯಾರ್' ಎಂದು ಚಿಕ್ಕ ಮಕ್ಕಳನ್ನು ಅವರ ಅಪ್ಪ ಅಮ್ಮಂದಿರು ಮಾತಾಡಿಸುತ್ತಿದ್ದಾರೆ. ಅವರ ಬಾಲ್ಯದ ಮೇಲೆ ಇಂಗ್ಲಿಷ್ ಹೊರೆ ತಂದು ಹೇರುತ್ತಿದ್ದಾರೆ. ಇಂಗ್ಲಿಷ್ ಈ ಕಾಲದ ಅನಿವಾರ್ಯ ಎಂಬುದನ್ನು ವ್ಯಾವಹಾರಿಕವಾಗಿ ನೋಡಬೇಕೇ ವಿನಃ ಕೌಟುಂಬಿಕವಾಗಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳದ ಹೊರತೂ ಕನ್ನಡಕ್ಕೆ ಉಳಿಗಾಲ ಇಲ್ಲ.
ನಮ್ಮಲ್ಲಿ ಕನ್ನಡ ಸಾಹಿತ್ಯ ಲೋಕವನ್ನು ಸಮೃದಗೊಳಿಸಿದ ಮಹಾ ಮಹಿಮರಲ್ಲಿ ಅನೇಕರ ಮನೆ ಮಾತು ಬೇರೇನೋ ಆಗಿತ್ತು. ಗೋವಿಂದ ಪೈ, ದ ರಾ ಬೇಂದ್ರೆ, ಗೋಕಾಕ್ ಮೊದಲಾದವರನ್ನು ಈ ಸಾಲಲ್ಲಿ ಹೆಸರಿಸಬಹುದು. ಮಾತೃ ಭಾಷೆಯನ್ನೂ ಮೀರಿ ಅವರಿಗೆ ನಾಡ ಭಾಷೆಯಾದ ಕನ್ನಡವನ್ನು ಉಳಿಸಲು ಬೆಳೆಸಲು ಸಾಧ್ಯವಾಯಿತು ಎಂದಾದರೆ ಮಾತೃಭಾಷೆಯೇ ನಾಡ ಭಾಷೆಯಾದ ನಮ್ಮ ನಿಮ್ಮಂಥವರಿಗೆ ಕೊನೆ ಪಕ್ಷ ಆತ್ಮ ಮಾತಾಗಿಯಾದರೂ, ಸಂಬಂಧ ಭಾಷೆಯಾಗಿ ಆದರೂ ರೂಡಿಸಿಕೊಳ್ಳುವುದು ಯಾಕೆ ಕಷ್ಟ? ಪ್ರಶ್ನೆ ಪ್ರತಿ ಕನ್ನಡಿಗನ ಮನೆಯಲ್ಲೂ ಮೊಳಗಬೇಕು. ಕೊನೆಪಕ್ಷ ಅಮ್ಮ, ಅತ್ತೆ, ಮಾವ, ಅತ್ತಿಗೆ-ಯಂಥ ಸಂಬಂಧಗಳು `ಆಂಕಲ್, ಮಮ್ಮಿ, ಡ್ಯಾಡಿ'ಗಳಾಗಿ ಮಾರ್ಪಡುವ ಅಪಾಯವನ್ನು ತಪ್ಪಿಸಿದರೆ ಈ ಸಲದ ರಾಜ್ಯೋತ್ಸವಕ್ಕೆ ಆಗಬಹುದಾದ ಮಹತ್ವದ ನಿರ್ಣಯ.
ಇಲ್ಲಿ ರಾಜ್ಯೋತ್ಸವದ ದಿನ ಬಣ್ಣದ ಬಾವುಟಗಳು ಹಾಡುವುದಲ್ಲ. ಆ ದಿನದಿಂದ ಕನ್ನಡ ನಾಮಪಲಕವನ್ನು ಜಾರಿಗೆ ತರುವುದಲ್ಲ. ಕನ್ನಡ ವಿರೋ ಅಕಾರಿಗಳ ವಿರುದ ಕ್ರಮ ಕೈಗೊಳ್ಳುವುದಲ್ಲ. ಶಾಸ್ತ್ರೀಯ ಸ್ಥಾನ ಮಾನ ಕನ್ನಡಕ್ಕೂ ಸಿಕ್ಕಿತೆಂದು ಬೀಗುವುದಲ್ಲ. ನಮ್ಮ ಆಡುಭಾಷೆ ಕನ್ನಡ ನಮ್ಮ ದಿನನಿತ್ಯದ ಭಾಷೆಯಾಗಿ ಪ್ರಾಮಾಣಿಕವಾಗಿ ಜಾರಿಗೆ ಬಂದರೆ (ಅದು ಬಹಳ ವೈಯಕ್ತಿಕ ನೆಲೆಯಲ್ಲಿ, ಊಟ, ನಿದ್ದೆ, ಮೈಥುನದಷ್ಟು ಖಾಸಗಿಯಾದ ನೆಲೆಯಲ್ಲಿ) ಅದು ನಿಜವಾದ ರಾಜ್ಯೋತ್ಸವ ಆಚರಣೆ.
kalla kullarige namaskara. hegideere? nimma articles oduttiruttene. chanda bariteeri ibbaru.
ReplyDeletemunda endu sikteerri...