Tuesday, November 18, 2008

ಕಿರು­ಗೆಜ್ಜೆ ಲಜ್ಜೆಗೆ ಜೋ ಜೋ



jogula



ಜೋಗುಳ ಎನ್ನು­ವುದು ಒಂದು ಅತ್ಯಂತ ಮಾನ­ವೀಯ ಕಲ್ಪನೆ. ಅಮ್ಮ ತನ್ನ ಕೈ ಬಳೆ ಸದ್ದಿನ ಲಯದ ಮೂಲಕ ಮಗು­ವಿನ ಉಸಿ­ರಾ­ಟದ ಲಯ­ವನ್ನು ಮಾತಾ­ಡಿ­ಸುವ ಪರಿ ಅದು. ಅಲ್ಲಿ ಅಮ್ಮನ ಮಮತೆ, ಮಗು­ವಿನ ಅರ್ಪ­ಣಾ­ಭಾವ, ವಾತಾ­ವ­ರ­ಣದ ತಾದಾತ್ಮ್ಯ, ಮಗುವಿನ ನೆತ್ತಿಯ ಸುವಾ­ಸ­ನೆ­ಗಳು ಒಂದಾ­ಗು­ತ್ತವೆ. ಪ್ರತಿ ಹೆಣ್ಣಿಗೂ ತಾಯ್ತನ ವರ, ಪ್ರತಿ ಮಗು­ವಿಗೂ ಜೋಗುಳ ವರ.
ಹಾಗೆ ನೋಡಿ­ದರೆ ಜೋಗುಳ ಎಲ್ಲರ ಎದೆ­ಯೊ­ಳ­ಗಿ­ರುವ ಒಂದು ಆಕಾ­ರ­ವಿ­ಲ್ಲದ ಭಾವ. ಅಲ್ಲಿ ರಾಗ­ಜ್ಞಾನ ಚೆನ್ನಾ­ಗಿ­ರ­ಬೇ­ಕಾ­ಗಿಲ್ಲ, ಸಾಹಿ­ತ್ಯದ ಹಂಗಿಲ್ಲ, ಜೋಗುಳ ಹಾಡು­ವು­ದನ್ನು ಯಾರಾ­ದರೂ ಮೆಚ್ಚಿ ಅಭಿ­ನಂ­ದಿ­ಸಲಿ ಎಂಬ ಅಪೇ­ಕ್ಷೆ­ಯಿಲ್ಲ. ತನ್ನ ಕರು­ಳಿನ ಕೊಡು­ಗೆ­ಯನ್ನು ಅಮ್ಮ ಮಲ­ಗಿ­ಸು­ತ್ತಾಳೆ, ಮಲ­ಗಿ­ಸು­ತ್ತು­ನು­ನುನು' ಅಂತ ಹಾಡು­ತ್ತಾಳೆ, ರಾಗ ಬದ­ಲಾ­ದು­ದನ್ನೂ ಗಮ­ನಿ­ಸ­ದಾ­ಗು­ತ್ತಾಳೆ. ಇಲ್ಲಿ ಬೇಕಾ­ಗಿ­ರು­ವುದು ಎರಡು ಮನ­ಸ್ಸ­ಗಳ ನಡು­ವಿನ ಒಂದು ಭಾವ ಮಾತ್ರ.

ಅಷ್ಟೇ ಆಲ್ಲ, ಜೋಗುಳ ತಾಯ್ತ­ನದ ಪ್ರತೀಕ. ಮಗು ಹುಟ್ಟಿ ಬೆಳೆ­ಯು­ವ­ರೆಗೆ ಆಮ್ಮ ಜೊಗುಳ ಹೇಳು­ತ್ತಾಳೆ. ಜೋಗುಳ ಕೇಳಿ ಮಗು ಬೆಳೆದು, ಜೋಗು­ಳ­ವನ್ನು ಮರೆ­ಯ­ಬ­ಹುದು. ಒಂದು ಕಾಲ­ಕ್ಕೆ­ಅ­ಮ್ಮನ ಜೋಗು­ಳಕ್ಕೆ ಹಠ ಮಾಡು­ತ್ತಿದ್ದ ಮಗ/ಳು ನಿಧಾ­ನ­ವಾಗಿ ಬದು­ಕಿನ ಕುಲು­ಮೆ­ಯಲ್ಲಿ ಬದ­ಲಾ­ಗುತ್ತಾ ಹೋಗು­ತ್ತಾನೆ/ಳೆ. ಆಗ ತನ್ನ ಮಗ/ಳು ತನ್ನ ಅಂತ್ಯ­ಕಾ­ಲದ ಹೊತ್ತಿಗೆ ಹಾಡ­ಬ­ಹು­ದಾದ ಮೌನ ಜೋಗು­ಳ­ಕ್ಕಾಗಿ ಕಾಯು­ತ್ತಾಳೆ ಅಮ್ಮ. ತನ್ನ ಕೆನ್ನೆಯ ಮೇಲೆ ನೇವ­ರಿ­ಸುವ ತನ್ನ ಕುಡಿಯ ಕೈಗಾಗಿ ಅಮ್ಮ ಈ ಜಗದ ತೊಟ್ಟಿ­ಲಲ್ಲಿ ಮಲಗಿ ಮೌನ­ವಾಗಿ ಅಳು­ತ್ತಾಳೆ.
ಅಮ್ಮ­ನಿಗೆ ಮಗು ತಾಯಿ
ಮಗುವೇ ಆಮ್ಮನ ಕಾಯಿ!
***
ಇದೀಗ ಅಮ್ಮನ ರೀತಿ ಬೇರೆ, ಮಗು­ವಿನ ರೀತಿ ಬೇರೆ. ಜೋಗುಳ ಇಲ್ಲೀಗ ಇನ್ನಷ್ಟು ಸಾಂಕೇ­ತಿಕ. ಬೇಬಿ­ಸಿ­ಟಿಂ­ಗ್‌­ನಲ್ಲಿ ತನ್ನ ಮಗು­ವನ್ನು ಬಿಟ್ಟ ಆಮ್ಮ, ಗಡಿ­ಬಿ­ಡಿ­ಯಲ್ಲಿ ಕಂದ­ನನ್ನು ಮುದ್ದಿಸಿ ಹೊರ­ಟರೆ ಅದೇ ಮಗು­ವಿನ ಪಾಲಿನ ಜೋಗುಳ. ರಾತ್ರಿ ಆಯಾಳ ಕೈಯಲ್ಲಿ ಮಗು­ವನ್ನು ಬಿಟ್ಟು ಗಂಡ, ಹೆಂಡತಿ ನೈಟ್‌ ಶಿಫ್ಟ್‌ಗೆ ಹೊರಟು ನಿಂತಾಗ ಮಗು­ವಿ­ನೆಡೆ ಆ ಪೋಷ­ಕರು ಎಸೆದ ಒಮದು ಮಮ­ತೆಯ ನೋಟವೇ ಆ ಮಗು­ವಿನ ಪಾಲಿಗೆ ಜೋಗುಳ. ಸರೋ­ಗೇಟ್‌ ಮದರ್‌, ಸಿಂಗಲ್‌ ಪೇರೆಂ­ಟಿಂಗ್‌ ಎಂಬೆಲ್ಲಾ ತಂತ್ರ­ಜ್ಞಾ­ನ­ಪ್ರೇ­ರಿತ ತಾಯ್ತ­ನದ ಜಗತ್ತಲ್ಲಿ ಮನೆ ಮನೆಯ ರಾಮ, ಕೃಷ್ಣ, ಚಂದ್ರ­ಹಾ­ಸರು ದಿಕ್ಕೆಟ್ಟು ನೋಡು­ತ್ತಿ­ದ್ದಾರಾ? ಮಡಿ­ಲಲ್ಲಿ ಮಗು ನಲಿಯೇ, ನಲಿದ ಮಗುವೂ ಮಡಿ­ಲಲ್ಲಿ ನಿಲ್ಲದೇ ಯಶೋದೆ, ದೇವ­ಕಿ­ಯರು ಕಂಗಾ­ಲಾ­ಗಿ­ದ್ದಾರಾ?

ತಾಯ್ತ­ನದ ಹಲವು ಮುಖ­ಗ­ಳನ್ನು ಹೊತ್ತ ಧಾರಾ­ವಾ­ಹಿ­ಯೊಂದು ಇದೇ ನವೆಂ­ಬರ್‌ 24ರಿಂದ ಝೀ ಚಾನ­ಲ್‌ನಲ್ಲಿ ಪ್ರಸಾ­ರ­ವಾ­ಗು­ತ್ತಿದೆ. `ಪ್ರೀತಿ ಇಲ್ಲದ ಮೇಲೆ' ಎಂಬ ಜನ­ಪ್ರಿಯ ಧಾರಾ­ವಾ­ಹಿಯ ಚುಕ್ಕಾಣಿ ಹಿಡಿ­ದಿದ್ದ ವಿನು ಬಳಂಜ ಅವರೇ ಈ ಧಾರಾ­ವಾ­ಹಿಯ ನಿರ್ದೇ­ಶಕ. ಹೆಸರು: ಜೋಗುಳ. `ನ­ಚಿ­ಕೇತ್‌' ಬರೆದ ಕತೆಗೆ ಚಿತ್ರ­ಕತೆ ಸಿದ­­ಪ­ಡಿ­ಸಿ­ರು­ವ­ವರು ಪತ್ರ­ಕರ್ತ ಸತ್ಯ­ಮೂರ್ತಿ ಆನಂ­ದೂರು. ಕರ್ನಾ­ಟಕ ಶಾಸ್ತ್ರೀಯ ಸಂಗೀತ ಪರಂ­ಪ­ರೆಯ ದೊಡ್ಡ ವಿದ್ವಾಂಸ ಆನೂರು ಅನಂ­ತ­ಕೃಷ್ಣ ಶರ್ಮ (ಶಿವು) ಈ ಧಾರಾ­ವಾ­ಹಿಗೆ ಸಂಗೀತ ನೀಡುವ ಮೂಲಕ ಕಿರುತೆ­ರೆಗೆ ಕಾಲಿ­ಟ್ಟಿ­ದ್ದಾರೆ. 24ರಿಂದ ಸೋಮ­ವಾ­ರ­ದಿಂದ ಶುಕ್ರ­ವಾ­ರ­ದ­ವ­ರೆಗೆ ರಾತ್ರಿ 8.30ಕ್ಕೆ ಪ್ರಸಾ­ರ­ವಾಗುವ ಈ ಧಾರಾ­ವಾ­ಹಿಯ ಶೀರ್ಷಿಕೆ ಗೀತೆ­ಯನ್ನು ಬರೆ­ದಿದ್ದು ವಿಕಾಸ ನೇಗಿ­ಲೋಣಿ.
ಆದರ ಪೂರ್ಣ­ಪದ್ಯ ಇಲ್ಲಿದೆ:
ಭಾವ­ಗಳ ತೊಟ್ಟಿ­ಲಲ್ಲಿ ಮನಸೇ ಮಗು­ವಾಗಿ
ಲಾಲಿಯ ಹಾಡಲಿ ಜಗ­ವೆಲ್ಲಾ
ಜೋಜೋ ಜೋಜೋ...

ಕಿಲ­ಕಿಲ ನಗು­ವಿನ ಶ್ಯಾಮನೇ
ತೆರೆ­ಸಲಿ ಹೃದ­ಯದ ಕಣ್ಣನೇ
ಮನೆ ಮನದ ಕನ­ಸಾಗು
ಕನಸೇ ನೀ ಉಸಿ­ರಾ­ಗು
ಕನ­ಸಿನ ತೇರಲಿ ಬಯ­ಕೆ­ಗಳ ಆಗ­ಮನ
ಪಯ­ಣದ ದಾರಿ­ಯಲಿ ಹೆಜ್ಜೆ ಹೆಜ್ಜೆಯೂ ರೋಮಾಂ­ಚ­ನ
ಎಲ್ಲರ ಎದೆ­ಯೊ­ಳಗೆ ಮಗು­ವೊಂದು ಮಲ­ಗಲಿ
ಸದ್ದು ಮಾಡದೇ ಅಮ್ಮ ಮುದ್ದಿ­ಸಲಿ
ಜೋ ಜೋ ಎಂದರೆ ಕಂದ­ನಿಗೆ ಸವಿ­ಹಾಲು
ಜೋಗು­ಳದ ಪ್ರೀತಿ­ಯಲಿ ಎಲ್ಲ­ರಿಗೂ ಸಮ­ಪಾಲು
ಕಿರು­ಗೆಜ್ಜೆ ಲಜ್ಜೆಗೆ ಜೋ ಜೋ
ಬೆಳೆಯೋ ಹೆಜ್ಜೆಗೆ ಜೋ ಜೋ

6 comments:

  1. ಎಲ್ಲರ ಎದೆಯೊಳಗೆ ಮಗುವೊಂದು ಮಲಗಲಿ... ತುಂಬಾ ಚೆನ್ನಾಗಿದೆ. ಕಂಗ್ರಾಟ್ಸ್ ವಿಕಾಸ್.

    ಮೊನ್ನೆ 'ಕಳ್ಳ' ಸಿಕ್ಕಿದ್ದರು. ಈ ಹಿಂದೆ ಒಂದು ರಾತ್ರಿ ಸಿಕ್ಕಿದ್ದರು. ಆಗ ನಾನೇ ಕಳ್ಳನಂತೆ ತಪ್ಪಿಸಿಕೊಂಡೆ
    -ಜಿ ಎನ್ ಮೋಹನ್

    ReplyDelete
  2. "ಎಲ್ಲರ ಎದೆ­ಯೊ­ಳಗೆ ಮಗು­ವೊಂದು ಮಲ­ಗಲಿ

    ಸದ್ದು ಮಾಡದೇ ಅಮ್ಮ ಮುದ್ದಿ­ಸಲಿ"

    ಸೂಪರ್‍ ಸಾಲುಗಳು ಸರ್‍..:)

    ReplyDelete
  3. A promising lyricist in the making!

    ReplyDelete
  4. Dear Vikas,
    yesterday first time I saw the 'Jogula" ad on Zee Kannada. one moment i was really stunned at the lines
    ಎಲ್ಲರ ಎದೆ­ಯೊ­ಳಗೆ ಮಗು­ವೊಂದು ಮಲ­ಗಲಿ
    ಸದ್ದು ಮಾಡದೇ ಅಮ್ಮ ಮುದ್ದಿ­ಸಲಿ
    really, they are lyrical genious. thanks for adding some value to the TV serials.

    ReplyDelete
  5. ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ರಂಜಿತ್‌, ಪ್ರಶಾಂತ್‌ ರೈ, ವೆಂಕಟರಮಣ ಹೆಗಡೆ, ಜಿ ಎನ್‌ ಮೋಹನ್‌ ಅವರಿಗೆಲ್ಲಾ ಧನ್ಯವಾದಗಳು!
    ಎಲ್ಲರೂ ನನಗಿಷ್ಟವಾದ ಸಾಲನ್ನೇ ಮೆಚ್ಚಿಕೊಂಡಿದ್ದಕ್ಕೆ ನನಗೆ ಇನ್ನಷ್ಟು ಹೆಚ್ಚು ಸಂಭ್ರಮವಾಯಿತು. ವೆಂಕಟರಮಣ ಹೆಗಡೆ ಅವರ ಮಾತಿಗೊಂದು ಸಣ್ಣ ಸ್ಪಷ್ಟನೆ.
    ಇತ್ತೀಚೆಗೆ ಹಿರಿಯ ಪತ್ರಕರ್ತ ಮಿತ್ರರೊಬ್ಬರು ಹೇಳುತ್ತಿದ್ದರು: ಹಿಂದಿ ಧಾರಾವಾಹಿಗಳಿಗೆ ಹೋಲಿಸಿದರೆ ಕನ್ನಡ ಧಾರಾವಾಹಿಗಳ ಸಂಸ್ಕೃತಿ ಅಷ್ಟು ಹದಗೆಟ್ಟಿಲ್ಲ!
    ಟೀವಿ ಕಾರ್ಯಕ್ರಮಗಳ ಮೌಲ್ಯವನ್ನು ಹೆಚ್ಚಿಸಿದ್ದೀರಿ ಎಂಬ ದೊಡ್ಡ ಮಾತನ್ನು ವೆಂಕಟರಮಣ ಅವರು ಹೇಳಿದ್ದೀರಿ, ಅದು ನನಗೆ ಸಿಕ್ಕ ಅಪೂರ್ವ ಕಾಮೆಂಟ್‌ ಎನ್ನುತ್ತಾ ವಿನಮ್ರನಾಗಿ ಸ್ವೀಕರಿಸುತ್ತೇನೆ.
    ನಿಮ್ಮೆಲ್ಲರ ಪ್ರೀತಿಯ
    ವಿಕಾಸ್‌ ನೇಗಿಲೋಣಿ

    ReplyDelete
  6. ee tanaka nodida Dharavahigalli edu atuthamavagi moodi barutha ede.Nijavagi edu Bhavanegala tottilu.Kannalle abinaya sochiso kalavidaru ee Dharavahiya + point.Nannanta sanna kalavidaru entaha apporva avakashakkagi entaha patragaligagi kayuthirutheve.Jogulada title musicgagi kayuthirutheve.uttama kathe, olleya kalavidaru, olleya title track kottadakkagi dhanyavadagalu.

    ReplyDelete