[caption id="attachment_158" align="aligncenter" width="500" caption="ಚಿತ್ರಕೃಪೆ: ಪ್ರದೀಪ್ ರಘುನಾಥನ್"]
ಈ ದಾರಿ ಸುಸ್ತು ಕಡಿಮೆ ಮಾಡಲು ನಿನಗೆ ನಾನೊಂದು ಕತೆ ಹೇಳುತ್ತೇನೆ.
ಹೀಗೆ ನಮ್ಮ ಅನೇಕ ಜನಪದ ಕತೆಗಳು ಶುರುವಾಗುತ್ತವೆ. ಗಿಳಿ ಕತೆ ಹೇಳಿದ್ದು, ಬೇತಾಳ ಕತೆ ಹೇಳಿದ್ದು ನಮಗೆಲ್ಲಾ ಗೊತ್ತು.
ಆದರೆ ಇಲ್ಲಿ ಸ್ವಲ್ಪ ತಾಂತ್ರಿಕವಾಗಿ ಅಪ್ಡೇಟ್ ಆಗಿ `ಬ್ಲಾಗ್' ಕತೆ ಹೇಳುತ್ತದೆ. ಕಳ್ಳಕುಳ್ಳ ಬ್ಲಾಗ್ನ `ತಿಳಿಯ ಹೇಳುವೆ ಇಷ್ಟ ಕತೆಯನು' ಮಾಲಿಕೆಯಲ್ಲಿ ಕತೆ ಶುರುವಾಗುತ್ತದೆ ಎಂದು ನಿನ್ನೆ ಹೇಳಲಾಗಿತ್ತಲ್ಲಾ, ಹೌದು ಕತೆ ಶುರುವಾಗುತ್ತದೆ.
ಅದಕ್ಕಾಗಿ ಚಕ್ಕಳಮಕ್ಕಳ ಹಾಕಿಕೊಂಡು ಕುಳಿತುಕೊಳ್ಳಿ. ಕತೆ ಹೇಳುವವರು ಈಗ ರೆಡಿ ಆಗುತ್ತಿದ್ದಾರೆ. ನೆಟ್ ಡೌನ್ ಇದ್ದರೆ, ಮಂತ್ರಿಗಳು ಉದ್ಘಾಟನೆಗೆ ತಡವಾದರೆ, ಬಸ್ ಬರಬೇಕಾಗಿದ್ದು ಇನ್ನೂ ಬಸ್ಸ್ಟ್ಯಾಂಡ್ಗೆ ಬರದಿದ್ದರೆ, ಸಿಗ್ನಲ್ ಬಿಟ್ಟರೂ ತಾಂತ್ರಿಕ ಕಾರಣದಿಂದ ಟ್ರಾಫಿಕ್ ಪೊಲೀಸ್ ಆ ದಾರಿಯನ್ನು ಸುಗಮಗೊಳಿಸದಿದ್ದರೆ, ಪವರ್ಕಟ್ ಆಗಿ, ಇನ್ನೂ ಕರೆಂಟ್ ಬರದಿದ್ದರೆ ಕಣ್ಣರಳಿಸಿ, ತಲೆ ತುರಿಸಿಕೊಂಡು, ಕೈ ಕಾಲು ಬಡಿದು, ಬಂದೇ ಬರುತ್ತದೆ ಎಂದು ತಾಳ್ಮೆಯಿಂದ ಕಾಯುವ ನೀವು ನಮ್ಮ `ಕತೆ'ಗೂ ಕಾಯುತ್ತೀರಲ್ಲಾ?
ಇನ್ನೇನು ಬಂದೇ ಬಿಡುತ್ತದೆ, ಕತೆ.
ಅಯ್ಯೋ ಬೇಗ..
ReplyDeletePeethike swalpa jaasti aayitu.
ReplyDelete