Wednesday, November 12, 2008

ತಿಳಿಯ ಹೇಳುವೆ ಇಷ್ಟಕತೆಯನು

[caption id="attachment_155" align="aligncenter" width="500" caption="ಚಿತ್ರ ಕೃಪೆ: ರಾಬರ್ಟ್‌ ಡಾಸನ್‌"]ರಾಬರ್ಟ್‌ ಡಾಸನ್‌[/caption]

`ಎಲ್ಲರೊಳಗೂ ಒಂದೆ ಕತೆ ಇರುತ್ತದೆ' ಎಂದಿದ್ದರು ಹಿಂದೊಮ್ಮೆ ಖ್ಯಾತ ಕತೆಗಾರ ಯಶವಂತ ಚಿತ್ತಾಲ. `ಅಮ್ಮಾ ಇವತ್ತು ಶಾಲೆಯಲ್ಲಿ ಏನಾಯ್ತು ಗೊತ್ತಾ' ಎಂದು ಹೇಳುತ್ತಾ ಶಾಲೆಯಿಂದ ಕಣ್ಣರಳಿಸಿಕೊಂಡು ಓಡಿ ಬರುವ ಮಗುವಿನಲ್ಲೂ ಒಂದು ಕತೆ ಇರುತ್ತದೆ ಎಂದು ಅವರು ಒಂದು ಸಲ ಹೇಳಿದ್ದರು.
ಕತೆ ಯಾರಲ್ಲೂ ಇರಬಹುದು. ಅಂಥ ಕತೆಗಳನ್ನು ಆಗಾಗ ನೀಡುವ ಪ್ರಯತ್ನವನ್ನು `ಕಳ್ಳಕುಳ್ಳ' ಮಾಡಲಿದೆ. ಒಂದಿಷ್ಟು ರೀಮೇಕ್‌, ಒಂದಿಷ್ಟು ಸ್ವಮೇಕ್‌ ಕತೆಗಳು ಹಾಗೇ ಹರಿದು ಬರಲಿವೆ ಈ ಬ್ಲಾಗಂಗಡಿಯಲ್ಲಿ. ಆ ಮಾಲಿಕೆಯ ಮೊದಲ ಕತೆಯ ಹೆಸರು: ಗುರುವಿನ ಗುಲಾಮನಾಗುವ ತನಕ.
ಅದನ್ನು ಬರೆದವರು ಯಾರು, ಹ್ಯಾಗಿದೆ, ಎಂಥ ಕತೆ, ರೀಮೇಕಾ, ಸ್ವಮೇಕಾ ಎಂಬೆಲ್ಲಾ ಪ್ರಶ್ನೆಗಳಿಗೆ ಆ ಕತೆಯ ಪ್ರಕಟಣೆಯಲ್ಲೇ ಉತ್ತರ ಸಿಗುತ್ತದೆ.
ಕಾಯೋಣ ಕತೆ ಕೇಳೋದ್ಯಾವಾಗ ಅಂತ?

1 comment:

  1. [...] ತಿಳಿಯ ಹೇಳುವೆ ಇಷ್ಟಕತೆಯನು `ಎಲ್ಲರೊಳಗೂ ಒಂದೆ ಕತೆ ಇರುತ್ತದೆ’ ಎಂದಿದ್ದರು ಹಿಂದೊಮ್ಮೆ ಖ್ಯಾತ ಕತೆಗಾರ ಯಶವಂತ ಚಿತ್ತಾಲ. `ಅಮ್ಮಾ ಇವತ್ತು ಶಾಲೆಯಲ್ಲಿ ಏನಾಯ್ತು ಗೊತ್ತಾ’ ಎಂದು ಹೇಳುತ್ತಾ ಶಾಲೆಯಿಂದ ಕಣ್ಣರಳಿಸಿಕೊಂಡು ಓಡಿ ಬರುವ ಮಗುವಿನಲ್ಲೂ ಒಂದು ಕತೆ ಇರುತ್ತದೆ ಎಂದು ಅವರು ಒಂದು ಸಲ ಹೇಳಿದ್ದರು. ಕತೆ ಯಾರಲ್ಲೂ ಇರಬಹುದು. ಅಂಥ ಕತೆಗಳನ್ನು ಆಗಾಗ ನೀಡುವ ಪ್ರಯತ್ನವನ್ನು `ಕಳ್ಳಕುಳ್ಳ’ ಮಾಡಲಿದೆ. ಒಂದಿಷ್ಟು ರೀಮೇಕ್‌, ಒಂದಿಷ್ಟು ಸ್ವಮೇಕ್‌ ಕತೆಗಳು ಹಾಗೇ ಹರಿದು ಬರಲಿವೆ ಈ ಬ್ಲಾಗಂಗಡಿಯಲ್ಲಿ. ಆ ಮಾಲಿಕೆಯ ಮೊದಲ ಕತೆಯ ಹೆಸರು: ಗುರುವಿನ ಗುಲಾಮನಾಗುವ ತನಕ. [...]

    ReplyDelete