ಬಾಡಿ ಬೀಳುವಾಗ
ಹೊಲಕೆ ಹೋಗಿ ಬಂದ
ಅಮ್ಮ ಜ್ವರವೆಂದು
ಮಲಗಿದವಳು ಏಳಲೇ ಇಲ್ಲ!
ಅವಳ ಮೈ ತಣ್ಣಗಾದ ಹೊತ್ತಿನಿಂದ
ಒಳ ಮನೆ ಕತ್ತಲಲ್ಲಿ
ಹಚ್ಚಿಟ್ಟ ಹಣತೆ ಆರಲಿಲ್ಲ,
ಬೊಂಬು ಬಂತು
ಗಡಿಗೆ ಬಂತು
ಯಾರೋ ದಾನ ಕೊಡಲು
ಕುಂಬಳಕಾಯಿ ತಂದರು
ಪೇಟೆಯಲ್ಲಿದ್ದ ಮಗ ಬಂದ
ತೊಲ ಬಂಗಾರದ ಮಗಳು ಬಂದಳು
ನೆಂಟ-ಬೀಗ-ಸೋದರಳಿಯ
ಏನೂ ತಿಳಿಯದ ಮೊಮ್ಮಕ್ಕಳು
ಬಂದರು... ಹೋದರು....
ಒಂದು ತಿಂಗಳ ಹಿಂದಷ್ಟೇ
ಅಮ್ಮನೊಡನೆ ಜಗಳವಾಡಿದ್ದ
ಜಲಜತ್ತೆ
ಇವತ್ತು ಬಂದಿದ್ದು ಮುದ್ದಾಂ ಹೊಗಳಿಕ್ಕೆ,
ಮಾವನ ಮುಖದ ಮೇಲೆ
ವಿಷಾದ ಕಟ್ಟಿಕೊಟ್ಟ ಮೌನಗಂಟು,
ಕೆಲಸದ ಕಸುಮಿ,
ಮುಸುರೆ ಸುಬ್ಬಿ,
..... ಯಾರೊಬ್ಬರ
ಕಣ್ಣಲ್ಲೂ ಕೊನೆಯಿರದ ಕಿನಾರೆ...
ಏಕೋ ವಡೆ ಊಟದ
ರುಚಿಯಲ್ಲಿ
ಅಮ್ಮನ ಕೈ ಬಳೆ ಸದ್ದಿರಲಿಲ್ಲ,
ಮಿಂದುಟ್ಟ ಮಡಿ,
ನಡೆವಾಗ ನಲಿವ
ತುರುಬು ತುದಿ ಮಲ್ಲಿಗೆ,
ಸದಾ ಬಿರುಕು ಬಿಟ್ಟೇ ಇದ್ದ
ಹಿಮ್ಮಡಿ,
ಪ್ರೀತಿ ತಡವಿದ ನುಡಿ
ಊಹೂಂ, ಸದ್ದಾಗಲಿಲ್ಲ
ಯಾರೆಲ್ಲಾ ಬಂದರು,
ಏನೇನೋ ತಂದು
ಸಾಂತ್ವನದ ಮಾತೆಂದರು,
ಹಸಿಗಂಚಿಗೆ
ಉಪ್ಪು ಕಡಿಮೆ ಎಂದರು,
ಕೋಸಂಬರಿ ತಿಂದು
ಏನೋ ಮೊದಲಿನ ರುಚಿಯೇ ಇಲ್ಲಪ್ಪ
ಎಂದರು...
ಊಟ ಮುಗಿಸಿ ಬಾಳೆ ಎಲೆ
ಮಡಚಿದ್ದಷ್ಟೇ,
ಅಜ್ಜನ ತಿಥಿಯೂಟ ಮುಗಿದಾಗ
ಯಾವಾಗಲೂ ತಾಂಬೂಲ
ತಂದಿಡುತ್ತಿದ್ದ
ಅಮ್ಮನ ಜಾಗ ಈಗ
ಬರಿದೇ ಖಾಲಿಯಾಗಿತ್ತು.
ಯಾರೇನೇ ಅಂದರೂ
ಹತ್ತು ದಿನಗಳಿಂದೀಚೆ
ಮೊಮ್ಮಗನ ಎಣಿಕೆ ಒಂದೇ;
ಯಾರೆಲ್ಲ ಬಂದರು
ಆದರೂ ಅಜ್ಜಿಯೇಕೆ ಇನ್ನೂ ಬರಲೇ ಇಲ್ಲ?
fantastic.. especially the last line!
ReplyDeleteತುಂಬಾ ಚೆನ್ನಾಗಿದೆ. ಓದಿ ಕಣ್ಣೀರು ಬಂದುಹೋಯ್ತು!
ReplyDeleteವಿಕಾಸ್. ಮನಸು ತೋಯಿಸುವ ಕವನ. ತುಂಬಾನೇ ಚೆನ್ನಾಗಿದೆ
ReplyDeleteಪ್ರಮೋದ್, ಮಧು ಮತ್ತು ಶ್ರೀದೇವಿ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteನಾನು ಈ ಕವಿತೆಯನ್ನು ಬರೆದು ಸುಮಾರು ಎಂಟು ವರ್ಷಗಳಾದವು. ಅದರ ನಂತರ ನನ್ನ ಬರೆವಣಿಗೆಯಲ್ಲಿ, ನಿಲುವಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ `ಅಮ್ಮ' ಹಾಗೇ ಇದ್ದಾಳೆ.
ಅಮ್ಮನ್ನು ಕಳೆದುಕೊಂಡ ಎಲ್ಲರಿಗೂ, ಕಳೆದುಕೊಂಡರೆ ಎಂಬ ಭಯ ಕಾಡುವ ಎಲ್ಲರಿಗೂ ಈ ಕವಿತೆಯ ಅರ್ಪಣೆ.
ಅವಳ ಕೈ ಬಳೆ ಸದ್ದು ಇಲ್ಲವಾದ ದಿನ ನಮ್ಮ ನಿಮ್ಮ ಮನಸ್ಸು ಮರುಭೂಮಿಯಾಗಬಹುದು
-ವಿಕಾಸ ನೇಗಿಲೋಣಿ
ಯಾಕೆ ಇಂತದ್ದನ್ನೆಲ್ಲ ಬರೆದು ಕಣ್ಣು ತೊಯಿಸ್ತೀರಿ? :( :(
ReplyDeleteadbhuta kavana... manassannu muTTitu...taTTitu
ReplyDeleteವಿಕಾಸ್
ReplyDeleteಅಮ್ಮ ಬಡಿಸೋ ಅಡುಗೆಯಲ್ಲಿ ಅಮ್ಮ ಅನ್ನೋದೇ ರುಚಿ ಅಂದ್ರಲ್ಲಾ ಸುನಂದಾ ಬೆಳಗಾವ್ಕರ್. ಎಷ್ಟು ನಿಜ ಅಲ್ವ
ಅವ್ರೆ ಇನ್ನೊಂದು ಸಲ ಹೇಳಿದ್ರು ಅಮ್ಮ ಬೆಲ್ಲ ಕಡೆದ ಕಲ್ಲು ಅಂತ- ಅಮ್ಮಂದಿರಿಗೆ ನಮಸ್ಕಾರ
-ಜಿ ಎನ್ ಮೋಹನ್
Adbutha really adbutha...... nija taayiyannu kaledukondare aguva novannu adbuthavagi barediddiri. hats of to you.
ReplyDeleteSathya
Vikas still you sing ???
ReplyDeleteHope not furget that??
Nice to see you on net.
Best off luck.
Really a good poem.....
I liked it
prashant
Preeti mattu vishada- eradannoo kattikotta reeti adbhuta Vikas. Heege bareyuttiri.
ReplyDelete