ಮಿಸ್ಡ್ ಕಾಲ್ ಬರೆಯುತ್ತದೆ,
ಪ್ರೀತಿಯ ಓಲೆಯನು
ಹೆಚ್ಚು, ಕಡಿಮೆ, ಮಧ್ಯಮ- ದರದ
ಹ್ಯಾಂಡ್ಸೆಟ್ಗಳ ಮೇಲೆ.
ಪ್ರೀತಿಗೆ ಎಲ್ಲವೂ ಸಮಾನ.
ಹಠಾತ್ ಸಿಗ್ನಲ್ ಬಿದ್ದರೆ
ಇರಬೇಕು ಅಕ್ಕಪಕ್ಕ
ಚೆಂದನೆಯ ಹುಡುಗಿಯರು,
ಹುಡುಗಿಗೆ ಎದುರುಗಡೆ ಸುಂದರಾಂಗ.
ಕ್ಷಣವೆಷ್ಟೇ ಕಳೆಯುತ್ತಿದ್ದರೂ
ಹಸಿರು, ಹಳದಿ, ಕೆಂಪು
ದೀಪಗಳು
ಮಧುಚಂದ್ರನ ಪ್ರತಿಫಲನ,
ಯಾರಿಗೋ ಕಾಲ್ ಬರುತ್ತದೆ,
`ಆಹಾ ಎಂಥ ಮಧುರ ಯಾತನೆ'
ಮಳೆಯ ಸುರಿವಿಗೆ ಹೆದರಿ
ವ್ಯಾನಿಟಿ ಬ್ಯಾಗ್ನಿಂದ
ಕೊಡೆ ಹೊರಬರಬಾರದು,
ಮಳೆಯ ಹನಿಗೆ
ಹೆರಳು ಹೆಣಿಕೆ,
ಪಕ್ಕದಲ್ಲಿ ಪ್ರಿಯನ ನಡಿಗೆ,
ಈ ಸುಮಧುರ ಸಮಾಗಮಕ್ಕೆ
ಇಬ್ಬರ ಮೊಬೈಲ್ನ
ರಿಂಗ್ಟೋನೇ ರೀರೆಕಾರ್ಡಿಂಗ್.
ಆಸ್ಪತ್ರೆಯ ಒಳಗಿದ್ದಾಗ
ಪ್ರಿಯಕರ ಫೋನ್ ಬರಬಾರದು,
ಹಾಸಿಗೆ ಮೇಲೆ ಮಲಗಿದ
ನಿಸ್ತೇಜ ಕಣ್ಣುಗಳು ಮಂಜಾಗುತ್ತವೆ.
ಒಳಗಿರುವ ಪ್ರಿಯತಮೆಯರ
ಪ್ರಿಯಕರರ
ಫೋನ್ಗಳಿಗೆ ಸಿಗ್ನಲ್ಲೇ ಸಿಗಬಾರದು,
ಎಷ್ಟಾದರೂ
ವೃದಾಪ್ಯಕ್ಕೆ ಹರೆಯ
ನಡುವೆ ನಾಟ್ ರೀಚೇಬಲ್!
ಚೆಂದ, ಚೆಂದದ ಕವಿತೆ..
ReplyDeleteಯಾರ್ರಿ ಇದು ಬರೆದಿದ್ದು? ನಾವ್ಯಾರಿಗೆ ಅಂತ ಬೆನ್ನುತಟ್ಟಬೇಕು? ಕಳ್ಳನೋ ಕುಳ್ಳನೋ? ಆಮೇಲೆ ಹೇಳಿ ಅದೆಲ್ಲ. ಬಟ್ ಚೆನ್ನಾಗಿದೆ ಕವನ
ReplyDeleteಕಾಲ್ ಮಿಸ್ ಕಾಲ್ ಗಳ ಮಧ್ಯೆ ಇರುವ ಕಾಲ...ಇದನೆಲ್ಲ ಹಿಡಿದಿಡಲು ಕವಿತೆಗೆ ಮಾತ್ರ ಸಾಧ್ಯವೇನೋ...ಖುಷಿ ಕೊಟ್ಟಿತು ಕವನ..
ReplyDeletekavithe chennagide kulla heege bari
ReplyDelete