ಮತ್ತೊಮ್ಮೆ `ಅಕ್ಟೋಬರ್ 2' ಬಂದಿದೆ. ಕೆಲವರು ಆ ದಿನವನ್ನು ಅಕ್ಟೋಬರ್ ತಿಂಗಳಲ್ಲಿ ರಜೆ ಒದಗಿಸುವ ದಿನವಾಗಿ ನೋಡಿದ್ದಾರೆ. ಕೆಲವರು ಆ ದಿನ ಮದ್ಯ ಸರಬರಾಜಿಲ್ಲ ಎಂದು ಬೇಜಾರಾಗಿದ್ದಾರೆ. ಕೆಲವರು ಆ ದಿನ ಸತ್ಯಾಗ್ರಹದ ಡೇಟ್ ಆಗಿ ಇಟ್ಟುಕೊಂಡಿದ್ದಾರೆ. ಕೆಲವರಿಗೆ ಆ ದಿನ ಸರ್ಕಾರಕ್ಕೆ ತಮ್ಮ ಆಗ್ರಹ ನೀಡಲು ಪುಣ್ಯದಿನ.
ಕೆಲವರಿಗೆ ಮಾತ್ರ ಅದು ಗಾಂೀಜಿಯನ್ನು ನಿಜವಾಗಿ ನೆನಪು ಮಾಡಿಕೊಳ್ಳುವ ಸುದಿನ.
ಗಾಂೀಜಿ ಒಂದು ದಿನದ ಮಟ್ಟಿಗೆ ನೆನಪಾಗಬೇಕೇ ಎನ್ನುವುದು ಮತ್ತೂ ಕೆಲವರ ನೋವು. ಗಾಂೀಜಿ ಭಾರತ- ಪಾಕಿಸ್ತಾನವನ್ನು ಒಡೆದರು ಎಂಬುದು ಹಲವರ ದೂರು. ಅವರ ಎಡಬಲ ಇಬ್ಬರು ಹೆಂಗಸರು ಯಾವಾಗಲೂ ಇರುತ್ತಿದ್ದರಂತೆ ಎಂದು ಬಾಯಿ ಚಪ್ಪರಿಸಿದ ಮಂದಿ ನೂರು. ಅವರ ಬದುಕಿನ ಸೆನ್ಸೇಷನಲ್ ಸುದ್ದಿ ಇನ್ನೂ ಏನಾದರೂ ಸಿಗುತ್ತದಾ ಎಂದು `ಇನ್‌ವೆಸ್ಟಿಗೇಟಿವ್ ಜರ್ನಾಲಿಸಂ'ನಲ್ಲಿ ತೊಡಗಿರುವವರು ಕೆಲವರು.
`ಲಗೇ ರಹೋ ಮುನ್ನಾಭಾಯಿ' ಚಿತ್ರದ `ಗಾಂೀಗಿರಿ'ಯ ಮೂಲಕ ಗಾಂ ಅವರ ತತ್ವ ಮತ್ತೆ ಹುಟ್ಟು ಪಡೆದುಕೊಂಡಿತು ಎನ್ನುವ ವಾದ ಕೆಲವರದು. ಗಾಂೀಗಿರಿ ಎಂಬ ರೊಮ್ಯಾಂಟಿಕ್ ಕಲ್ಪನೆಯನ್ನು ಕಾಯಿನ್ ಮಾಡಿ, ಗಾಂೀಜಿಯವರನ್ನೇ ಅಲ್ಪ ದೃಷ್ಟಿಕೋನದಲ್ಲಿ ಯುವಜನತೆಯನ್ನು ಹಾದಿ ತಪ್ಪಿಸಲಾಗುತ್ತಿದೆ ಎನ್ನುವುದು ಇನ್ನೂ ಮುಂತಾದವರ ಅಳಲು. ಈ ಚರ್ಚೆಗಾಗಿ ವಿಚಾರ ಸಂಕಿರಣಗಳು, ಚರ್ಚಾಕೂಟಗಳು, ಕಾಲೇಜಿನಲ್ಲಿ ವಾದ ವಿವಾದ, ಮಾತಿನ ಜಟಾಪಟಿ.
ಇಷ್ಟಾದರೂ ಗಾಂೀಜಿ ತಮ್ಮೆಲ್ಲಾ ಫೋಟೋಗಳಲ್ಲಿ ಹಸನ್ಮುಖಿ. ರಾಮಾಯಣ, ಮಹಾಭಾರತದ ಥರದ ಪುಣ್ಯ ಪುರಾಣದ ಥರ. ಸೀತಾ ಲಕ್ಷ್ಮಣರ ಜತೆಯ ರಾಮನಂತೆ, ರಾಧೆ, ರುಕ್ಮಿಣಿ, ಸತ್ಯಭಾಮೆ, ಯಶೋದೆಯರ ಜತೆಯ ಕೃಷ್ಣನಂತೆ ಮುಗುಳ್ನಗುತ್ತಾ ಚಿತ್ರಪಟವಾಗಿದ್ದಾರೆ ಗಾಂೀಜಿ ಕೂಡ. ಅವರಿಗೆ ತಮ್ಮ ದೋತಿ, ಕೋಲು, ಕನ್ನಡಕಗಳೇ ಜೊತೆ. ಮೌನ ಕವಿತೆಯೊಳಗೇ ಅವಿತಂತೆ, ಮೌನವೇ ಆ ಕವಿತೆಯ ಶಕ್ತಿಶಾಲಿ ಮಾತಂತೆ.
ಅವರ ತತ್ವಗಳ ಮೇಲೆ ಮತ್ತೆ ಮತ್ತೆ ಪಿಎಚ್ ಡಿ ಆಗುತ್ತಿದೆ. ಅವರ ಫೋಟೋಗಳು ನೆಟ್‌ನಲ್ಲಿ ಪಾಪ್ಯುಲರ್. ಸಿನಿಮಾಗಳು ಅವರನ್ನು ಮತ್ತೆ ಮತ್ತೆ ಹುಟ್ಟುಸಿ, ಜೋಗುಳ ಹಾಡಿ ಅವರ ವ್ಯಕ್ತಿತ್ವಕ್ಕೆ ಹೊಸ ಜನ್ಮ ನೀಡುತ್ತಿವೆ. ಗಾಂೀಜಿ ಜಗತ್ತಿನ ಕಣ್ಣಲ್ಲಿ ವಿಸ್ಮಯ, ಸಂಶೋಧಕರ ಪಾಲಿಗೆ ಮುಗಿಯದ ಗಣಿ. ಸಾಧಕರಿಗೆ ಸೂರ್ತಿ ತುಂಬುವ ದಣಿ. ಸತ್ಯಸಾಧಕರಿಗೆ `ವೈಷ್ಣವ ಜನತೋ' ಹಾಡು ಮತ್ತು ಖಾದಿಯಂಥ ದೇಸಿ ವಸ್ತ್ರಗಳನ್ನು ಮಾರ್ಕೆಟಿಂಗ್ ಮಾಡಹೊರಟವರಿಗೆ ಅದರ ಪ್ರಚಾರ ರಾಯಭಾರಿ.
ಏನಾದರಾಗಲಿ, ಗಾಂೀ ತಾತನಿಗೆ ಪ್ರತಿ ತಲೆಮಾರಿನ ಜನರೂ ಆಭಾರಿ.ಙ
"ಗಾಂಧಿಜಯಂತಿಯ ದಿನ ಸತ್ಯವನ್ನಾಡೋಣ,
ReplyDeleteಸುಳ್ಳಿಗೊ ಇಡಿ ವರುಷ ತೆರವೆ ಇಹದು."
-----------------------ದ.ರಾ.ಬೇಂದ್ರೆ
ಹೌದು ಬಿಡಿ, ಗಾಂಧೀಜಿಯವರ ಎಲ್ಲಾ ತತ್ವಗಳನ್ನು(ಅವುಗಳಲ್ಲಿನ ಸತ್ವ, ಜೊಳ್ಳು ಎಲ್ಲವನ್ನೂ ಸೇರಿ) ಹಿಂದೂ ಮಹಾಸಾಗರಕ್ಕೆ ಎಸೆದು ತಣ್ಣಗಿರುವ ನಮಗೆ ವರ್ಷಕ್ಕೊಮ್ಮೆ ಅವರನ್ನು ನೆನೆಪಿಸಿಕೊಳ್ಳುವುದಕ್ಕೆ ಸಾವಿರ ನೆಪಗಳು ಬೇಕು. ಯಾರಿಗೆ ಹೇಗೇಗೆ ನೆನಪಾಗಬೇಕು ಎಂದು ನಾವು ಕೇಳಿಕೊಳ್ಳಬೇಕು. ಅಲ್ಲವೇ?
ReplyDeleteಸುಪ್ರೀತ್
ಹೌದು ಬಿಡಿ, ಗಾಂಧೀಜಿಯವರ ಎಲ್ಲಾ ತತ್ವಗಳನ್ನು(ಅವುಗಳಲ್ಲಿನ ಸತ್ವ, ಜೊಳ್ಳು ಎಲ್ಲವನ್ನೂ ಸೇರಿ) ಹಿಂದೂ ಮಹಾಸಾಗರಕ್ಕೆ ಎಸೆದು ತಣ್ಣಗಿರುವ ನಮಗೆ ವರ್ಷಕ್ಕೊಮ್ಮೆ ಅವರನ್ನು ನೆನೆಪಿಸಿಕೊಳ್ಳುವುದಕ್ಕೆ ಸಾವಿರ ನೆಪಗಳು ಬೇಕು. ಯಾರಿಗೆ ಹೇಗೇಗೆ ನೆನಪಾಗಬೇಕು ಎಂದು ನಾವು ಕೇಳಿಕೊಳ್ಳಬೇಕು. ಅಲ್ಲವೇ?
ReplyDeleteಸುಪ್ರೀತ್
ಇಲ್ಲಿ ನೀನು ಇಷ್ಟೆಲ್ಲಾ ಮುಂದುವರಿತಾ ಇರೋದು ಗೊತ್ತೇ ಆಗಿರಲಿಲ್ಲ ನೋಡು. ಈ ಬ್ಲಾಗ್ ಲೋಕದಲ್ಲಿ ಒಂದಷ್ಟು ಅನುವಾದದ ಕೆಲಸ ಇತ್ತೀಚೆಗೆ ನಡೆಯುತ್ತಿರುವುದು ಎಲ್ರಿಗೂ ಖುಶಿಯ ವಿಷಯ ಅಲ್ವಾ? ಕಳ್ಳ-ಕುಳ್ಳ ನೀನೊಬ್ಬನೇ ಆದ್ರೂ ಬರೀತಾ ಇರು ಪುಣ್ಯಾತ್ಮ. "ಓ ನನ್ನ ಚೇತನಾ, ಆಗು ನೀ ಅನಿಕೇತನ' ಅಂತ ಕುವೆಂಪು ಹಾಡಿದ್ದು ಅವನ ಬಗ್ಗೆಯೇ ಇರಬೇಕು !
ReplyDelete