ಒಟ್ಟಾರೆ ಇಬ್ಬರ ಜನ್ಮದಿನದ ಹೊತ್ತಿಗೆ ಒಂದಿಷ್ಟು ಕೆಲಸಗಳು ನಡೆಯುತ್ತವೆ. ಈ ನಡುವೆ ಅನಾಥಾಶ್ರಮಕ್ಕೆ, ವೃದ್ಧಾಶ್ರಮಕ್ಕೆ ಹೋಗುವ ಸಂಪ್ರದಾಯವೂ ಈ ಹೊತ್ತಿಗೆ ನಡೆಯಬಹುದು.
***
ಗಾಂನಗರದ ವಿಷಯವೇ ಸ್ಥಾವರವಾದುದು. ಇಲ್ಲಿ ಟ್ರೆಂಡ್‌ಗೆ ತಕ್ಕಂತೆ ಮನುಷ್ಯರನ್ನು ಗುರುತಿಸಲಾಗುತ್ತದೆ. ಒಬ್ಬ ನಾಯಕನ ಚಿತ್ರಗಳು ಗೆದ್ದ ತಕ್ಷಣ ಆತ ನಿಜವಾಗಿ ಜನ್ಮ ತಾಳುತ್ತಾನೆ. ಅಲ್ಲಿಂದ ಅವನ ಜನ್ಮದಿನವನ್ನು ನಿರ್ಮಾಪಕ, ವಿತರಕರು ನೆನಪು ಮಾಡಿಕೊಳ್ಳಲಾರಂಭಿಸುತ್ತಾರೆ. ಮನೆ ಎದುರು ಬೊಕೆ ಬರುತ್ತದೆ, ಹಾರ, ತುರಾಯಿ, ಕೇಕುಗಳು ಬರುತ್ತವೆ. ಹೊಸ ಚಿತ್ರಗಳು ಘೋಷಣೆಯಾಗುತ್ತವೆ, ಆ ದಿನವೇ ಆ ನಾಯಕನ ಚಿತ್ರವನ್ನು ಬಿಡುಗಡೆ ಮಾಡೋಣ ಎಂದು ತೀರ್ಮಾನಿಸುತ್ತಾರೆ. ಆ ದಿನವೇ ಚಿತ್ರ ಬಿಡುಗಡೆ ಮಾಡಲು ಹೋಗಿ ಸೆನ್ಸಾರ್ ಮಂಡಳಿಯವರಿಂದ ಬೈಸಿಕೊಳ್ಳುತ್ತಾರೆ.
ಹಾಗೆ ನೋಡಿದರೆ `ಕಾಮಿಡಿ ಟೈಮ್' ಗಣೇಶ್ ಅವರ ಜನ್ಮದಿನ ನೆನಪಾಗಲು ಅವರು `ಮುಂಗಾರು ಮಳೆ' ಗಣೇಶ್ ಆಗುವವರೆಗೆ ಕಾಯಬೇಕಾಯಿತು. ಆವರೆಗೆ ಧಾರಾವಾಹಿಯನ್ನು ಮಾಡುತ್ತಾ, ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರ ಮಾಡುತ್ತಾ, `ಚೆಲ್ಲಾಟ' ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದರಾದರೂ ಅವರನ್ನೂ, ಅವರು ಹುಟ್ಟಿದ ದಿನವನ್ನೂ ಯಾರೂ ನೋಟ್ ಮಾಡಿಟ್ಟುಕೊಂಡಿರಲಿಲ್ಲ. ವಿಜ್, ಪ್ರಜ್ವಲ್ ಮೊದಲಾದವರ ವಿಚಾರವಾಗಿಯೂ ಇದೇ ಟ್ರೆಂಡ್.
ಇದರ ಜತೆ ಇನ್ನೊಂದು ಟ್ರೆಂಡ್ ಇದೆ. ರಮೇಶ್ ಒಂದು ಕಾಲಕ್ಕೆ ಫ್ಯಾಮಿಲಿ ಸಿನಿಮಾ ಮಾಡುವ ನಿರ್ಮಾಪಕರ ಅನ್ನದಾತ. ಅವರನ್ನು ಹಾಕಿಕೊಂಡು ಎಷ್ಟು ಮಂದಿ ಅದೆಷ್ಟು ಸಿನಿಮಾ ಮಾಡಲಿಲ್ಲ, ಥಿಯೇಟರ್‌ಗಳ ಗಲ್ಲಾಪೆಟ್ಟಿಗೆಯಲ್ಲಿ ಹಣ ಬಾಚಿಕೊಳ್ಳಲಿಲ್ಲ? ದೇವರಾಜ್ ಅವರ ವೃತ್ತಿಯ `ಉತ್ಕರ್ಷ' ಕಾಲದಲ್ಲಿ ಅವರ ಕಾಲ್‌ಶೀಟ್‌ಗಾಗಿ ಎಷ್ಟು ನಿರ್ಮಾಪಕರು ಕಾಯುತ್ತಿರಲಿಲ್ಲ?
ಆದರೆ ಈಗ ದೇವರಾಜ್ ನಿಧಾನವಾಗಿ ಪೋಷಕ ಪಾತ್ರಗಳತ್ತ ತಿರುಗಿಕೊಂಡಿದ್ದಾರೆ. ತಮ್ಮ ಪಾಡಿಗೆ ತಾವು ಚಿತ್ರಗಳನ್ನು ಮಾಡಿಕೊಂಡು, ಪಾತ್ರ ಮುಗಿಸಿ ಮನೆಗೆ ತೆರಳುತ್ತಿದ್ದಾರೆ. ಅವರ ಸಜ್ಜನಿಕೆಯಿಂದಾಗಿ ತಮ್ಮ ಜನ್ಮದಿನವನ್ನು ಯಾರೂ ಆಚರಿಸುತ್ತಿಲ್ಲ ಎಂಬ ಬಗ್ಗೆ ಬೇಜಾರಾಗುತ್ತಿಲ್ಲ.
ಇದೆಲ್ಲಾ ಯಾಕೆ ಇಲ್ಲಿ ಪ್ರಸ್ತಾಪಿಸಬೇಕಾಗಿ ಬಂತೆಂದರೆ ಮೊನ್ನೆ ಮೊನ್ನೆ ರಮೇಶ್ ಅರವಿಂದ್ ಅವರ ಜನ್ಮದಿನ ಸದ್ದೇ ಇರದ ಉತ್ಸವವಾಗಿ ಮುಗಿದು ಹೋಯಿತು. ಅವರು ಅವರ ಪಾಡಿಗೆ ಒಂದಿಷ್ಟು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು, ಒಂದೆರಡು ಚಾನಲ್‌ಗಳು ಅವರನ್ನು ಮಾತಾಡಿಸಿದವು. ಇದನ್ನು ಬಿಟ್ಟರೆ ಯಾರೂ ನೆನಪು ಮಾಡಿಕೊಂಡು ವಿಶ್ ಮಾಡಿದ್ದೂ ಸುಳ್ಳು. ಅದೇ ಥರ ಗುರುವಾರ ಶ್ರುತಿ ಅವರ ಜನ್ಮದಿನ. ಅದೇ ಥರ 20ಕ್ಕೆ ದೇವರಾಜ್ ಅವರ ಜನ್ಮದಿನ.
***
ಜನ್ಮದಿನವನ್ನು ಆಚರಿಸಬೇಕೋ ಬೇಡವೋ, ಅದು ಒಬ್ಬನ ಜೀವಮಾನದಲ್ಲಿ ಅಷ್ಟೊಂದು ಮಹತ್ವದ ವಿಷಯವೋ ಎಂಬುದೆಲ್ಲಾ ಚರ್ಚಾಸ್ಪದ. ಆದರೆ ಒಬ್ಬನ ಜನ್ಮದಿನವನ್ನು ನೆನಪು ಮಾಡಿಕೊಳ್ಳುವುದು ಎನ್ನುವುದು ಬಹಳ ವೈಯಕ್ತಿಕವಾಗಿ, ತುಂಬ ಮಾನವೀಯ ಸಂಬಂಧದ ಒಂದು ಅಭಿವ್ಯಕ್ತಿ. ಆ ಅಭಿವ್ಯಕ್ತಿಯನ್ನೂ ವ್ಯಾಪಾರವಾಗಿ, ವ್ಯವಹಾರವಾಗಿ, ಅದರಿಂದ ತಮಗಾಗುವುದು ಫಾಯ್ದೆಯೋ ಅಲ್ಲವೋ ಎಂದು ಲೆಕ್ಕಾಚಾರ ಹಾಕುವುದು ಸರಿಯಲ್ಲವಲ್ಲಾ?
ಈಗ ಉತ್ಕರ್ಷದಲ್ಲಿದ್ದ ನಾಯಕ ನಾಳೆ ಮಾರ್ಕೆಟ್ ಇಲ್ಲದೇ ಕುಳಿತರೆ ಅವನ ಜನ್ಮದಿನವೂ ಇಂದಿನಂತೇ ನೆನಪಾಗುವುದು ಮುಖ್ಯ ತಾನೇ?
HI,
ReplyDeleteNimma lekhana tumba hidisitu. Neevu heluvudu 100% nija. Anyone may become a star overnight and at the same time 'stars' can be brought down to earth!!!
Ega nijavaglu bele iruvudu kalegalla, samajadalli obba vyakti yeshtu balashali yennuvudakke.
Bekadashtu jana adbhuta kalavidaru manyathe sigade hogiddare intha janarinda.....
Mukhyavagi nagarikaru echhetukollabeku.
(English nalli type madidakke kshame irali....)